ಕೈಕಾಲುಗಳನ್ನು ಆಡಿಸಬೇಡ, ಕುಣಿಸಬೇಡ, ಬೀಸಬೇಡ ಎಂಬ ಕಿವಿ ಮಾತುಗಳನ್ನು ನಮ್ಮ
ಹಿರಿಯರಿಂದ ಕೇಳಿರುತ್ತೇವೆ. ಈ ಆಲೋಚನೆಗಳು ತರ್ಕಬದ್ದವಲ್ಲದ್ದೆಂದು ಇಂದಿನ ಜನಾಂಗದವರ
ಅಭಿಪ್ರಾಯ. ಇಂತಹ ಆಲೋಚನೆಗಳು ಮೂಢ ನಂಬಿಕೆಗಳು ಎಂಬ ಪರಿಗಣನೆ ಆಗಿರುವುದು ಕೇವಲ
ವಿಪರ್ಯಾಸವೇ ಸರಿ!!!!!
ಇವು ಕೇವಲ ಮೂಢ ನಂಬಿಕೆಗಳಲ್ಲ. ಪೂರ್ವಿಕರ ಚಿಂತನೆ. ಅವರ ಆಲೋಚನೆಗಳಲ್ಲಿ ವಿಶೇಷಾರ್ಥವು ಅಡಕವಾಗಿರುತ್ತದೆ. ಅಂತಹ ಆಲೊಚನೆಗಳಲ್ಲಿ ಇದೂ ಒಂದು. ಕೈಕಾಲುಗಳನ್ನು ಆಡಿಸುವುದು, ಕುಣಿಸುವುದು, ಬೀಸುವುದಂತಹ ತಪ್ಪು ಅಭ್ಯಾಸಗಳಿಂದ ನಮ್ಮ ಮೆದುಳಿಗೆ ಅನವಶ್ಯಕ ಒತ್ತಡವಾಗಿ ವಿರುದ್ಧ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಿಂದ ನಮ್ಮ ಚೈತನ್ಯ ಹಾಗು ಜ್ಙಾಪಕ ಶಕ್ತಿಯು ಕ್ಷೀಣಿಸುತ್ತದೆ.
ಈ ವಿಷಯವಾಗಿ ಕೆಲವೆಡೆ ಪ್ರಯೋಗ ಮಾಡಲಾಗಿ ತಿಳಿದುಬಂದ ಉದಾಹರಣೆ ಇಂತಿದೆ: ಶಾಲೆಯ ಒಂದು ತರಗತಿಯಲ್ಲಿನ ಕುಶಾಗ್ರಮತಿಯುಳ್ಳ ಕೆಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯ್ತು. ಕೇಳಿದ ಪಾಠವನ್ನು ಒಂದೇ ಬಾರಿಗೆ ಮನನ ಮಾಡುತ್ತಿದ್ದ ಈ ವಿದ್ಯಾರ್ಥಿಗಳಿಗೆ ಕೈಬೆರಳುಗಳನ್ನು, ಕಾಲುಗಳನ್ನು ಅನವಶ್ಯಕವಾಗಿ ಉಪಯೋಗಿಸಲು ತಿಳಿಸಲಾಯ್ತು. ಇದರ ಪರಿಣಾಮವಾಗಿ ಅವರ ಚುರುಕುತನ ಹಾಗು ಜ್ಙಾಪಕ ಶಕ್ತಿಯು ಕ್ಷೀಣಿಸಿತು.
ಇಂತಹ ನಂಬಿಕೆಗಳ ಹಿಂದಿರುವ ಅರ್ಥ ಗ್ರಹಿಸಿದಲ್ಲಿ ನಂಬಿಕೆಗಳು ಕೇವಲ ಮೂಢನಂಬಿಕೆಗಳಾಗಿರುವುದಿಲ್ಲ!!! ಪೂರ್ವಿಕರ ಚಿಂತನೆಯ ಸ್ಪಷ್ಟೀಕರಣವಾಗಿರುತ್ತದೆ.